16 ಮಾರ್ಚ್ 2014

ಅಲ್ಲೇ ಕೂತು ಇಲ್ಲಿಯ ಮಾತು. .!


ನನಗೆ ಪ್ರತೀ ಬಾರಿಯೂ ಕಾಡುವ ಪ್ರಶ್ನೆ ಮತ್ತು  ಉತ್ತರ ಸಿಗದ ಪ್ರಶ್ನೆಯೂ ಇದೇ.

ದೂರದ ನಗರದಲ್ಲಿ  ಕುಳಿತು ಹಳ್ಳಿಯ ಸುಖವನ್ನು  ವರ್ಣಿಸುವುದರಲ್ಲೇ ಕಾಲವನ್ನು  ಏಕೆ ಕಳೆಯುತ್ತಾರೆ ? ಮೂಲಭೂತವಾಗಿ ಆನನೋ. . ಅವಳೋ. .  ಹಳ್ಳಿಯಿಂದಲೇ ಹೋದವರು.ಹಾಗಿದ್ದರೆ ಮತ್ಯಾಕೆ ಈ ಸುಖವನ್ನು  ಬಿಟ್ಟು ಹೋದ ?.ನನ್ನ ಪ್ರಶ್ನೆಗೆ ಉತ್ತರವೇ ಇಲ್ಲ. .!.ಅಲ್ಲಿ ನಡೆಯುತ್ತಾ ಇದ್ದದ್ದು ತಾಲೂಕಿನ ಸಾಹಿತ್ಯ ಸಮ್ಮೇಳನ.

ಸಾಹಿತ್ಯದ ಸಮ್ಮೇಳನ ಎಂದಾಗ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತದೆ.ನಾನು ಗಮನಿಸಿದ, ಕೇಳಿದ ಅಷ್ಟೂ ಗೋಷ್ಟಿಗಳಲ್ಲಿ  ಈ ಮಣ್ಣಿನ ಸ್ಪರ್ಶ ಇತ್ತು.ಆದರೆ ಕೊನೆಗೆ ಎಲ್ಲೋ ಒಂದು ಕಡೆ ಅದು ಮತ್ತೆ ಬರುತ್ತಿದ್ದದ್ದು ವಾಸ್ತವಿಕತೆಗಿಂತಲೂ ಹೆಚ್ಚಾಗಿ ವೈಭವೀಕರಣದ ಕಡೆಗೇ. ಹಳ್ಳಿಯಿಂದ “ನಗರದ ಕಾಂಕ್ರೀಟು” ಕಾಡಿಗೆ ತೆರಳಿದ ಆತನೋ. .  ಅವಳೋ. . ಇಂದು ಹಳ್ಳಿಯೇ ಅಂದ. .  ಇಲ್ಲಿಯ ಸುಖ ಅಲ್ಲಿಲ್ಲ ಎನ್ನುತ್ತಾನೆ. ಹಾಗೆ  ಹೇಳುವುದರ ಜೊತೆಗೇ ಹಳ್ಳಿಗೇ ಮತ್ತೆ ಬರುತ್ತೇನೆ ಎಂಬ ಮನಸ್ಥಿತಿ ಏಕೆ ಬರುವುದಿಲ್ಲ.ಬದುಕಿಗೆ . ಜೀವನೋಪಾಯಕ್ಕಾಗಿ  ನಗರವೇ ಆಗಬೇಕು ಏಕೆ.ಗ್ರಾಮೀಣ ಭಾರತ ಅಂತ ಒಂದಿಗೆ. .  ಹಳ್ಳಿ ಎಂಬ ಸುಂದರ ನಾಡಿದೆ ಇಲ್ಲಿಯೂ ಕೃಷಿ ಮಾಡಿಯೋ. . ಇತರ ಉದ್ಯೋಗ ಮಾಡಿಯೋ ಏಕೆ ಬದುಕು ಕಟ್ಟಿಕೊಳ್ಳಬಾರದು ?. ಭಾಷಣದಲ್ಲೋ. .  ಗೋಷ್ಟಿಯಲ್ಲೋ ಹೇಳುವ ಹಾಗೆ ಇದು ಸುಂದರ ನಾಡು ಆದರೆ.ಹಳ್ಳಿಯಲ್ಲಿ  ಮತ್ತೊಂದು ಸುಂದರ ಲೋಕ ಸೃಷ್ಟಿ ಮಾಡಬಹುದಲ್ಲಾ ?.

ಮೊನ್ನೆ ನಾನು ಕವಿಗೋಷ್ಟಿ ಕೇಳುತ್ತಿದ್ದೆ, ಅಲ್ಲಿ ನಾಲ್ಕು ಗೋಡೆಯ ನಡುವಿನ ಕುಟುಂಬದ ಕತೆ. .  ಮಕ್ಕಳ ಬದುಕಿನ ಬಗ್ಗೆ ಕೇಳಿದ್ದೆ. ಇಷ್ಟಕ್ಕೂ ಮತ್ತೆ ಮತ್ತೆ ಅದೇ ಮಕ್ಕಳು ಸಣ್ಣ ನಗರದಿಂದ ದೊಡ್ಡ ನಗರಕ್ಕೆ ವಲಸೆ ಹೋಗುತ್ತಾರೆ . ಅವರದೇ ಮಿತ್ರರು  ಹೋಗುತ್ತಾರೆ.ಕನಿಷ್ಟ ಹಳ್ಳಿಯ ಸುಂದರ ಬದುಕನ್ನು ಉಳಿಸಿಕೊಳ್ಳಲು ಒಬ್ಬನನ್ನಾದರೂ ಇಲ್ಲಿಯೇ ಉಳಿಸಿಕೊಳ್ಳಬಹುದಲ್ಲಾ ?, ಉಳಿದುಕೊಳ್ಲಬುದಲ್ಲಾ ?. ಅದು ಯಾಕೆ ಆಗುವುದಿಲ್ಲ. ಅಂದರೆ ಇದು  ಸಾಹಿತ್ಯಕ್ಕಾಗಿ , ತನ್ನ ವೈಭವೀಕರಣಕ್ಕೆ ಮಾತ್ರಾ ಅಂತ ಅರ್ಥವೇ?..

ಇದೆಲ್ಲಾ ಯೋಚಿಸುತ್ತಿದ್ದ ನನಗೆ ಅನಿಸಿದ್ದು,

ಅಲ್ಲಿ ನಿಜವಾದ ಆತ್ಮಾನುಭವ . .ಹಳ್ಳಿಯ , ಕೃಷಿ ಗ್ರಾಮೀಣ ಬದುಕನ್ನು ಉಳಿಸುವುದು, ಕಟ್ಟಿಡುವುದು ಉದ್ದೇಶವೇ ಅಲ್ಲ. ಅದೊಂದು  ಪಾಸಿಂಗ್. .  ಸುಮ್ಮನೇ ಹರಟೆಯ ಹೊತ್ತು  ಮಾತ್ರಾ .ಏಕೆಂದರೆ ಸಾಹಿತ್ಯ ಕಾರ್ಯಕ್ರಮ ಅಂದಾಕ್ಷಣ ಅಲ್ಲಿ ಒಂದಷ್ಟು ವಿವಾದ, ವಿಷಾದಗಳು,ಅನಗತ್ಯ ಸಂಗತಿಗಳು ಬೇಕೇ ಬೇಕು.ಹಾಗಾಗಿ ಹಾಗೇ ಸುಮ್ಮನೆ ಕುಳಿತು ಹೋಗುವುದೇ ಒಳ್ಳೆಯದೋ ಏನೋ ಅಂತ ಅನಿಸುತ್ತಿದೆ ಈಗೀಗ.